ಪ್ರಭಾಸ್​-ಓಂ ರಾವತ್ ಮಧ್ಯೆ ಇಲ್ಲ ವೈಮನಸ್ಸು; ನಟನ ಹಾಡಿ ಹೊಗಳಿದ ನಿರ್ದೇಶಕ

ಪ್ರಭಾಸ್ ನಟನೆಯ ‘ಆದಿಪುರುಷ್’ ಚಿತ್ರದ ಟೀಸರ್ ರಿಲೀಸ್ ಆದಾಗ ಎಲ್ಲ ಕಡೆಗಳಿಂದ ಟೀಕೆ ಬಂದಿತ್ತು. ಈ ವೇಳೆ ನಿರ್ದೇಶಕ ಓಂ ರಾವತ್ ವಿರುದ್ಧ ಪ್ರಭಾಸ್ ಸಿಟ್ಟಾದ ರೀತಿಯಲ್ಲಿ ವಿಡಿಯೋ ಒಂದು ವೈರಲ್ ಆಗಿತ್ತು. ‘ಓಂ ಕಮ್ ಟು ಮೈ ರೂಂ’ ಎಂದು ಪ್ರಭಾಸ್ ಹೇಳಿದ್ದು ವಿಡಿಯೋದಲ್ಲಿತ್ತು. ಇಬ್ಬರ ಮಧ್ಯೆ ವೈಮನಸ್ಸು ಇದೆ ಎಂದೇ ಹೇಳಲಾಗಿತ್ತು. ಆದರೆ, ಅದು ಸುಳ್ಳಾಗಿದೆ. ‘ಆದಿಪುರುಷ್​’ ಪ್ರೀ ರಿಲೀಸ್ ಇವೆಂಟ್​ನಲ್ಲಿ ಪ್ರಭಾಸ್ ಅವರನ್ನು ಓಂ ಹಾಡಿ ಹೊಗಳಿದ್ದಾರೆ. ಆ ವಿಡಿಯೋ ಇಲ್ಲಿದೆ.