ಸದನದಲ್ಲಿ ಬಿಜೆಪಿ ಶಾಸಕರ ಮಾತುಗಳನ್ನು ಕೇಳುತ್ತಿದ್ದರೆ ಅವರ ನಡುವೆ ಸಾಮರಸ್ಯ ಮತ್ತು ಸಂವಹನ ಕೊರತೆಯಿರೋದು ಕನ್ನಡಿಗರ ಗಮನಕ್ಕೆ ಬರುತ್ತಿದೆ. ವಿರೋಧ ಪಕ್ಷದ ನಾಯಕ ಮತ್ತು ಬಿಜೆಪಿ ರಾಜ್ಯಾಧ್ಯಕ್ಷನ ನೇಮಕ ನಡೆದ ಬಳಿಕ ಅವರ ನಡುವೆ ಅಸಮಾಧಾನ ಭುಗಿಲೇಳುತ್ತಿದೆ. ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಬಸನಗೌಡ ಯತ್ನಾಳ್ ಅವರಂತೆ ಪ್ರಾಯಶಃ ಎಸ್ ಎಸ್ ವಿಶ್ವನಾಥ್ ಕೂಡ ಆಕಾಂಕ್ಷಿಯಾಗಿದ್ದರು ಅನ್ನೋದು ಸದನದಲ್ಲಿ ಯಲಹಂಕ ಶಾಸಕನ ನಿನ್ನೆಯ ವರ್ತನೆಯಿಂದ ಗೊತ್ತಾಗುತ್ತದೆ.