ಮಡಿಕೇರಿ: KSRTC ಬಸ್​ ಅಡ್ಡಗಟ್ಟಿದ ಒಂಟಿ ಸಲಗ! ಮೈ ಜುಮ್ಮೆನ್ನುವ ವಿಡಿಯೋ ಇಲ್ಲಿದೆ

ಮಡಿಕೇರಿ, ಜುಲೈ 22: ರಸ್ತೆಯಲ್ಲಿ ಸಂಚರಿಸುತ್ತಿದ್ದಾಗಲೇ ಎದುರಾದ ಕಾಡಾನೆಯೊಂದು ಕೆಎಸ್​ಆರ್​ಟಿಸಿ ಬಸ್​ ಅನ್ನು ಅಡ್ಡಗಟ್ಟಿದ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ದೇವರಪುರ ಗ್ರಾಮದ ಬಳಿ ನಡೆದಿದೆ. ಕಾಫಿ ತೋಟಕ್ಕೆ ಹೋಗಲು ಯತ್ನಿಸಿದಾಗ ಚಾಲಕ ಬಸ್ ಚಲಾಯಿಸಲು ಯತ್ನಿಸಿದ್ದಾರೆ. ಈ ವೇಳೆ ಏಕಾಏಕಿಯಾಗಿ ಘೀಳಿಡುತ್ತಾ ಬಸ್ ಬಳಿ ಓಡಿ ಬಂದಾಗ ಚಾಲಕ ಬಸ್ ಆಫ್ ಮಾಡಿ ತನ್ನ ಸೀಟ್​ನಿಂದ ಎದ್ದು ಪಕ್ಕಕ್ಕೆ ಬಂದಿದ್ದಾರೆ. ಆನೆ ಫೀಳಿಡುತ್ತಾ ಓಡಿ ಬಂದ ಶೈಲಿ ನೋಡಿದರೆ ಬಸ್​ಗೆ ಹಾನಿ ಮಾಡುತ್ತೆ ಎನ್ನುವಂತಿತ್ತು. ಆದರೆ ಆನೆ ಬಸ್​ಗೆ ಯಾವುದೇ ಹಾನಿ ಮಾಡದೆ ಕಾಫಿ ತೋಟದತ್ತ ತೆರಳಿತು. ನಂತರ ಬಸ್ ಸಿಬ್ಬಂದಿ, ಪ್ರಯಾಣಿಕರು ನಿಟ್ಟುಸಿರುವ ಬಿಟ್ಟರು.