ಚಲಿಸುತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಕ್ಷಣ ಮಾತ್ರದಲ್ಲೇ ಇಡೀ ಕಾರು ಸುಟ್ಟು ಕರಕಲಾಗಿದೆ. ಬೆಂಗಳೂರಿನ ನಾಯಂಡನಹಳ್ಳಿ ಮೆಟ್ರೋ ನಿಲ್ದಾಣ ಬಳಿ ತಡ ರಾತ್ರಿ ನಡು ರಸ್ತೆಯಲ್ಲಿ ಕಾರಿಗೆ ಬೆಂಕಿ ಹೊತ್ತಿ ಕೊಂಡಿದೆ. ಇಡೀ ಸೆಂಟ್ರೋ ಕಾರು ಬೆಂಕಿಗೆ ಆಹುತಿಯಾಗಿದೆ. ಟ್ಯಾನರಿ ರಸ್ತೆಯಿಂದ ಚನ್ನಪಟ್ಟಣಕ್ಕೆ ಕಾರಿನಲ್ಲಿ ಕುಟುಂಬವೊಂದು ಪ್ರಯಾಣಿಸುತ್ತಿತ್ತು. ಈ ವೇಳೆ ಕಾರಿನ ಹಿಂಬದಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ರಸ್ತೆಯಲ್ಲೆ ಕಾರು ನಿಲ್ಲಿಸಿ ಇಡೀ ಕುಟುಂಬ ಕಾರಿನಿಂದ ಕೆಳಗೆ ಇಳಿದಿದೆ.