ಕಸ್ತೂರಬಾ ಬಾಲಕಿಯರ ವಸತಿ ಶಾಲೆಗೆ ಲೋಕಾಯುಕ್ತ ಇನ್​ಸ್ಪೆಕ್ಟರ್ ಭೇಟಿ, ಪೊರಕೆ ಹಿಡಿದು ಕ್ಲೀನ್ ಮಾಡಿದ ಸಲೀಂ ಅಹ್ಮದ್

ತುಮಕೂರು: ಪಾವಗಡ ತಾಲೂಕು ಆಸ್ಪತ್ರೆ ಪಕ್ಕದಲ್ಲಿರುವ ಕಸ್ತೂರಬಾ ಬಾಲಕಿಯರ ವಸತಿ ಶಾಲೆಗೆ ಲೋಕಾಯುಕ್ತ ಇನ್ಸ್‌ಪೆಕ್ಟರ್‌ ಸಲೀಂ ಅಹ್ಮದ್ ಅವರು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಾಲೆಯಲ್ಲಿ ಸ್ವಚ್ಛತೆಯೇ ಇಲ್ಲದ್ದನ್ನು ನೋಡಿ ಸಿಟ್ಟಾದ ಲೋಕಾ ಇನ್ಸ್‌ಪೆಕ್ಟರ್‌, ಸ್ವತಃ ಪೊರಕೆ ಹಿಡಿದು ಕಸ ಗುಡಿಸಿದರು. ಅಲ್ಲದೆ, ಟಿವಿ, ಸಿಸಿಟಿವಿ ಮೇಲೆ ಕೂತಿದ್ದ ಧೂಳನ್ನು ಬಟ್ಟೆಯಿಂದ ಒರೆಸಿ ಶುಚಿಗೊಳಿಸಿದರು. ಉತ್ತಮ ಶೌಚಾಲಯ, ಮಲಗಲು ಸರಿಯಾದ ವ್ಯವಸ್ಥೆಯಿಲ್ಲದ್ದಕ್ಕೆ ಬೇಸರ ವ್ಯಕ್ತಪಡಿಸಿದರು.