ಮೋದಿ ಬೆಂಗಾವಲು ವಾಹನ ರಿಹರ್ಸಲ್ ಮಾಡುತ್ತಿದ್ದ ರಸ್ತೆಯಲ್ಲಿ ಅಡ್ಡ ಬಂದ ಸೈಕಲ್ ಸವಾರನಿಗೆ ಥಳಿತ

ಪ್ರಧಾನಿ ನರೇಂದ್ರ ಮೋದಿ ಬೆಂಗಾವಲು ಪಡೆ ರಿಹರ್ಸಲ್ ಮಾಡುತ್ತಿದ್ದ ಪ್ರದೇಶದಲ್ಲಿ ಆಕಸ್ಮಿಕವಾಗಿ ಅಡ್ಡಬಂದ ಸೈಕಲ್ ಸವಾರನಿಗೆ ಪೊಲೀಸ್​ ಸಬ್​ಇನ್​ಸ್ಪೆಕ್ಟರ್ ದೈಹಿಕವಾಗಿ ಹಲ್ಲೆ ನಡೆಸಿದ್ದಾನೆ. ಪ್ರಧಾನಿಯವರ ಸೂರತ್ ಭೇಟಿಗೆ ಒಂದು ದಿನ ಮೊದಲು ಗುರುವಾರ ನಡೆದ ಈ ಘಟನೆಯ ವಿಡಿಯೋ ವೈರಲ್ ಆಗಿದೆ. ನಗರದ ಲಿಂಬಾಯತ್ ಪ್ರದೇಶದ ಖಾಲಿ ರಸ್ತೆಯಲ್ಲಿ ಪ್ರಧಾನಿಯವರ ಬೆಂಗಾವಲು ಪಡೆಯ ವಾಹನಗಳು ಹಾದುಹೋಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.