ಬೀಡಾ ಅಂಗಡಿಯಲ್ಲಿ ಅಂಗನವಾಡಿ! ಇದು ಲಕ್ಷ್ಮೀ ಹೆಬ್ಬಾಳ್ಕರ್ ತವರು ಜಿಲ್ಲೆಯಲ್ಲಿನ ದು:ಸ್ಥಿತಿ

ಇದು ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ತವರು ಜಿಲ್ಲೆಯಲ್ಲಿನ ದುಸ್ಥಿತಿ. ಲಕ್ಷ್ಮೀ ಹೆಬ್ಬಾಳ್ಕರ್ ತವರು ಜಿಲ್ಲೆಯಲ್ಲಿಯೇ ಇದೆಂಥಾ ಅದ್ವಾನ. ಸೂಕ್ತ ಕಟ್ಟಡವಿಲ್ಲದೆ ಬೀಡಾ ಅಂಗಡಿಯಲ್ಲಿ ಅಂಗನವಾಡಿ ನಡೆಸುತ್ತಿರುವ ಸಿಬ್ಬಂದಿ. ಮುಂದೆ ಚರಂಡಿ ನೀರು, ದೊಡ್ಡ ಗುಂಡಿ ಇದ್ದರೂ ಸಹ ಅಲ್ಲಿಯೇ ಮಕ್ಕಳ ಕಲಿಕೆ. ಇದು ಮುರಗೋಡ ಗ್ರಾಮದ ಅಂಗನವಾಡಿ ಸಂಖ್ಯೆ 3ರ ಮಕ್ಕಳ ಪರಿಸ್ಥಿತಿ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುರಗೋಡ ಗ್ರಾಮ.