ಐಶ್ವರ್ಯಾ, ಧರ್ಮ, ಅನುಷಾ: ಬಿಗ್​ ಬಾಸ್​ ಮನೆಯಲ್ಲಿ ಶುರುವಾಯ್ತಾ ತ್ರಿಕೋನ ಪ್ರೇಮ?

‘ಬಿಗ್​ ಬಾಸ್​ ಕನ್ನಡ ಸೀಸನ್​ 11’ ಶೋನಲ್ಲಿ ಪ್ರೀತಿ-ಪ್ರೇಮ ಚಿಗುರುವ ಲಕ್ಷಣ ಕಾಣಿಸಿದೆ. ಈ ಮೊದಲು ಕೂಡ ಬಿಗ್ ಬಾಸ್ ಮನೆಯಲ್ಲಿ ಕೆಲವು ಸ್ಪರ್ಧಿಗಳ ನಡುವೆ ಲವ್​ ಆಗಿತ್ತು. ಈಗ ಧರ್ಮ ಕೀರ್ತಿರಾಜ್​ ಮತ್ತು ಐಶ್ವರ್ಯಾ ಅವರು ಪರಸ್ಪರ ಆಕರ್ಷಿತರಾಗುತ್ತಿದ್ದಾರೆ. ಅಷ್ಟೇ ಅಲ್ಲದೇ, ಅನುಷಾ ರೈ ಕೂಡ ಇದೇ ಟ್ರ್ಯಾಕ್​ನಲ್ಲಿ ಇದ್ದಾರೆ. ಹಾಗಾಗಿ ದೊಡ್ಮನೆಯಲ್ಲಿ ತ್ರಿಕೋನ ಪ್ರೇಮ ಶುರುವಾಗುವ ಸೂಚನೆ ಸಿಕ್ಕಿದೆ. ಈ ಪ್ರೋಮೋದಲ್ಲಿ ಅದರ ಝಲಕ್​ ಕಾಣಿಸಿದೆ.