ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯಲ್ಲಿ ಒಂದು ಹುಲಿ ಕಾಡುಹಂದಿಯನ್ನು ಬೇಟೆಯಾಡುತ್ತಿತ್ತು. ಆದರೆ, ಅದಕ್ಕೆ ಹಂದಿಯನ್ನು ಹಿಡಿಯಲು ಸಾಧ್ಯವಾಗಲಿಲ್ಲ. ತೀವ್ರವಾದ ಬೆನ್ನಟ್ಟುವಿಕೆಯ ನಂತರ ಹುಲಿ ಮತ್ತು ಕಾಡುಹಂದಿ ಆಳವಾದ ಬಾವಿಗೆ ಬಿದ್ದವು. ಸಂಜೆ ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯಲ್ಲಿ ಆಳವಾದ ಕೃಷಿ ಬಾವಿಯಲ್ಲಿ ಹುಲಿ ಮರಿ ಮತ್ತು ಕಾಡುಹಂದಿ ಒಟ್ಟಿಗೆ ಸಿಕ್ಕಿಹಾಕಿಕೊಂಡಿತ್ತು. ನಂತರ ಆ ಎರಡೂ ಪ್ರಾಣಿಗಳನ್ನು ಬಾವಿಯಿಂದ ರಕ್ಷಿಸಲಾಯಿತು. ಅದು ಹೇಗೆಂಬುದರ ವಿಡಿಯೋ ಇಲ್ಲಿದೆ.