ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳು

ಬೊಮ್ಮಾಯಿ ಅವರನ್ನು ನೋಡುವ ಶಿವಕುಮಾರ್ ಎದ್ದು ನಿಂತು ಕೈ ಕುಲುಕುತ್ತಾರೆ. ನಂತರ ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಅಲ್ಲಿಗೆ ಆಗಮಿಸುತ್ತಾರೆ. ಈ ಬಾರಿ ಸಿದ್ದರಾಮಯ್ಯ ಸಹ ಎದ್ದು ನಿಂತು, ಏನು ಗೌಡರೇ ಹೇಗಿದ್ದೀರಿ, ಚೆನ್ನಾಗಿದ್ದೀರಾ ಅಂತ ಉಭಯಕುಶಲೋಪರಿ ನಡೆಸುತ್ತಾರೆ.