ಕೊನೆಯ ಮಹಡಿಯ ಸ್ವಿಮ್ಮಿಂಗ್​ ಪೂಲ್​ನಲ್ಲಿ ಮಲಗಿದ್ದ ಜೋಡಿ

ಮ್ಯಾನ್ಮಾರ್​ನಲ್ಲಿ 7.7 ತೀವ್ರತೆಯ ಭೂಕಂಪ ಸಂಭವಿಸಿದೆ. ಬ್ಯಾಂಕಾಕ್‌ನ ಹೋಟೆಲ್‌ನ ಮೇಲ್ಛಾವಣಿಯ ಸ್ವಿಮಿಂಗ್ ಪೂಲ್​ನಲ್ಲಿ ನಿಶ್ಚಿಂತೆಯಿಂದ ಮಲಗಿದ್ದ ಜೋಡಿ ಭೂಕಂಪದಿಂದ ತತ್ತರಿಸಿ ಹೋಗಿದ್ದರು. . ಶಾಂತವಾಗಿದ್ದ ಈಜುಕೊಳವು ವಿಪತ್ತಾಗಿ ಮಾರ್ಪಟ್ಟ ಭಯಾನಕ ಕ್ಷಣವನ್ನು ಸೆರೆಹಿಡಿದಿರುವ ವೀಡಿಯೊ ಈಗ ವೈರಲ್ ಆಗಿದೆ. ಈ ದೃಶ್ಯದಲ್ಲಿ ಒಬ್ಬ ವ್ಯಕ್ತಿ ಕೊಳದ ಪಕ್ಕದಲ್ಲಿ ವಿಶ್ರಾಂತಿ ಪಡೆಯುತ್ತಿದ್ದರೆ, ದಂಪತಿ ನೀರಿನಲ್ಲಿ ಲೌಂಜರ್‌ಗಳ ಮೇಲೆ ತೇಲುತ್ತಿರುವುದನ್ನು ಕಾಣಬಹುದು