ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಅನಿಲ್ ಕುಮಾರ್

ಬಸನಗೌಡ ಪಾಟೀಲ್ ಯತ್ನಾಳ್ ನಿಸ್ಸಂದೇಹವಾಗಿ ಗೊಂದಲದಲ್ಲಿದ್ದಾರೆ. ಶನಿವಾರ ಹೊಸ ಪಕ್ಷ ಕಟ್ಟುವುದಿಲ್ಲವೆಂದು ಹೇಳಿದ್ದ ಅವರು ನಿನ್ನೆ ಅದರ ಬಗ್ಗೆ ಇಂಗಿತ ವ್ಯಕ್ತಪಡಿಸಿದ್ದಾರೆ. ಏತನ್ಮಧ್ಯೆ, ಕಾಂಗ್ರೆಸ್ ಪಕ್ಷದ ನಾಯಕರು ಉಚ್ಚಾಟಿತ ಶಾಸಕನ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸುತ್ತಿದ್ದಾರೆ. ಯತ್ನಾಳ್ ಮತ್ತು ಕಾಂಗ್ರೆಸ್ ಪಕ್ಷದ ನಡುವೆ ಎಣ್ಣೆ ಸೀಗೆಕಾಯಿ ಸಂಬಂಧವಿದೆ ಮತ್ತು ಕಾಂಗ್ರೆಸ್ ಸಿದ್ಧಾಂತವನ್ನು ಅವರು ಯಾವತ್ತೂ ಒಪ್ಪಲ್ಲ.