ಬಳ್ಳಾರಿಯ ಮೂರು ಫಾರ್ಮ್​​ಗಳಲ್ಲಿ ಒಟ್ಟು 15,000 ಕೋಳಿಗಳು ಸಾವು: 10 ಕಿಮೀ ಸಾರ್ವಜನಿಕರ ಓಡಾಟಕ್ಕೆ ನಿರ್ಬಂಧ

ಬಳ್ಳಾರಿ ತಾಲೂಕಿನ ಕಪಗಲ್‌ನಲ್ಲಿರುವ ಖಾಸಗಿ ಕೋಳಿ ಫಾಮ್೯ನಲ್ಲಿ 15,000 ಕೋಳಿಗಳು ಸಾವನ್ನಪ್ಪಿವೆ. 8000 ಕೋಳಿಗಳು ಸ್ವಯಂ ಸಾವನ್ನಪ್ಪಿದರೆ, 7000 ಕೋಳಿಗಳನ್ನು ಜಿಲ್ಲಾಡಳಿತ ವಧೆ ಮಾಡಿದೆ. ಹಕ್ಕಿ ಜ್ವರದ ಶಂಕೆಯಿಂದಾಗಿ ಕಪಗಲ್‌ ಸುತ್ತ 10 ಕಿ.ಮೀ. ವ್ಯಾಪ್ತಿಯಲ್ಲಿ ಸಾರ್ವಜನಿಕರ ಓಡಾಟಕ್ಕೆ ನಿರ್ಬಂಧ ಹೇರಲಾಗಿದೆ. ಪಶುಸಂಗೋಪನಾ ಇಲಾಖೆ ತನಿಖೆ ನಡೆಸುತ್ತಿದೆ.