ದೇವಸ್ಥಾನದ ಅರ್ಚಕರು ಮಹಾಲಕ್ಷ್ಮಿ ದೇವಿಗೆ ಹಾಲು, ತುಪ್ಪ, ಮೊಸರು, ಎಳೆನೀರು ಮತ್ತು ನೀರಿನಿಂದ ಪಂಚಾಭಿಷೇಕ ಮಾಡಿದ್ದ್ದಾರೆ. ಪಂಚಾಭಿಷೇಕದ ನಂತರವೇ ಭಕ್ರರಿಗೆ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ನಸುಕಿನಲ್ಲೇ ಜನ ಬಂದು ದೇವಿಯ ದರ್ಶನ ಪಡೆಯಲಾರಂಭಿಸಿದ್ದರು. ಪೋಷಕರು ಮಕ್ಕಳನ್ನು ಕರೆದುಕೊಂಡು ದೇವಸ್ಥಾನಕ್ಕೆ ಬರುತ್ತಿದ್ದಾರೆ.