ಬಹುನಿರೀಕ್ಷಿತ ‘ಕಾಟೇರ’ ಸಿನಿಮಾದ ಶೂಟಿಂಗ್ ಚಾಲ್ತಿಯಲ್ಲಿದೆ. ಈ ಚಿತ್ರದಲ್ಲಿ ಮಾಲಾಶ್ರಿ ಮಗಳು ಆರಾಧನಾ ಅವರು ದರ್ಶನ್ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈ ಸಿನಿಮಾದ ಸುದ್ದಿಗೋಷ್ಠಿಗೆ ಮಾಲಾಶ್ರೀ ಹಾಜರಿ ಹಾಕಿದ್ದಾರೆ. ಮಗಳ ನಟನೆ ಬಗ್ಗೆ ಅವರು ಹೆಮ್ಮೆಯಿಂದ ಮಾತನಾಡಿದ್ದಾರೆ. ‘ನನ್ನ ಮಗಳ ಮೇಲೆ ನಿಮ್ಮ ಆಶೀರ್ವಾದ ಇರಲಿ. ರಾಕ್ಲೈನ್ ವೆಂಕಟೇಶ್ ಅವರಂತಹ ದೊಡ್ಡ ನಿರ್ಮಾಪಕರಿಂದ ನನ್ನ ಮಗಳು ಲಾಂಚ್ ಆಗುತ್ತಿರುವುದಕ್ಕೆ ಬಹಳ ಖುಷಿ ಆಗುತ್ತಿದೆ. ದರ್ಶನ್ ಅವರಿಂದಾಗಿ ಆಕೆ ಸುಲಭವಾಗಿ ನಟಿಸುತ್ತಿದ್ದಾಳೆ. ಪ್ರತಿ ದಿನ ಆಕೆ ಹೊಸದನ್ನು ಕಲಿಯುತ್ತಿದ್ದಾಳೆ. ಅಂಥ ಒಳ್ಳೆಯ ಕಲಾವಿದರ ಜೊತೆ ನಟಿಸುವ ಅವಕಾಶ ಅವಳಿಗೆ ಸಿಕ್ಕಿದೆ’ ಎಂದು ಮಾಲಾಶ್ರೀ ಹೇಳಿದ್ದಾರೆ.