ಟಿವಿ9 ಎಜುಕೇಶನ್ ಎಕ್ಸ್‌ಪೋ ಬೆಂಗಳೂರಿನಲ್ಲಿ ನಡೆಯುತ್ತಿದೆ. ಪಿಯುಸಿ ಪರೀಕ್ಷೆ ಮುಗಿಸಿ ಸಿಇಟಿಗೆ ಕಾಯುತ್ತಿರುವ ವಿದ್ಯಾರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ವಿವಿಧ ಕಾಲೇಜುಗಳು, ಕೋರ್ಸುಗಳು ಮತ್ತು ವೃತ್ತಿಪರ ಮಾರ್ಗದರ್ಶನ ಪಡೆದುಕೊಳ್ಳಬಹುದು. ಟಿವಿ9, ಕೆಎಲ್ ಡೀಮ್ಡ್ ವಿಶ್ವವಿದ್ಯಾಲಯ ಹಾಗೂ ಇತರ ಪ್ರತಿಷ್ಠಿತ ಸಂಸ್ಥೆಗಳು ಭಾಗವಹಿಸಿವೆ.