ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಯ ಕರ್ಮಕಾಂಡ ಬಗೆದಷ್ಟೂ ಬಯಲಾಗುತ್ತಿದೆ

ಚಾಮರಾಜನಗರ: ಸಾರ್ವಜನಿಕರಿಗೆ ವೈದ್ಯಕೀಯ ಸೇವೆ ಕೊಡಬೇಕಾದ ಸರ್ಕಾರಿ ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಯ ಕರ್ಮಕಾಂಡ ಬಗೆದಷ್ಟೂ ಬಯಲಾಗುತ್ತಿದೆ. ರಾತ್ರಿ ಹೆರಿಗೆ ಮಾಡಿಸಲು ಸೂಕ್ತ ವೈದ್ಯರು ಇರುವುದಿಲ್ಲ, ಇನ್ನು ಕರೆಂಟ್ ಹೋದ್ರೆ ಯುಪಿಎಸ್ ವ್ಯವಸ್ಥೆ ಸಹ ಇಲ್ಲ. ನಿನ್ನೆ ಭಾನುವಾರ ರಾತ್ರಿ ವನಜಾ ಎಂಬುವವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಈ ಹಿನ್ನೆಲೆ ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಗೆ ಡೆಲವರಿಗೆಂದು ಕುಟುಂಬಸ್ಥರು ಗರ್ಭಿಣಿಯನ್ನು ಕರೆದುಕೊಂಡು ಬಂದಿದ್ದರು. ಆದ್ರೆ ಗೈನೋಕಾಲಜಿಸ್ಟ್ ಹಾಗೂ ಅನಸ್ತಿಷಿಯಾ ನೀಡುವ ವೈದ್ಯರು ಇಲ್ಲದ ಕಾರಣ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಈ ಸರ್ಕಾರಿ ಆಸ್ಪತ್ರೆಯ ವೈದ್ಯರು ಸೂಚಿಸಿದ್ದಾರೆ.