ಚಾರ್ಮಾಡಿ ಘಾಟ್​ ರಸ್ತೆಯಲ್ಲಿ ಉರುಳಿ ಬಿದ್ದರುವ ಮರ

ಚಾರ್ಮಾಡಿ ಘಾಟ್​ನಲ್ಲಿ ಪದೇಪದೇ ಗುಡ್ಡಕುಸಿತ ಉಂಟಾಗುತ್ತಿರುವುದರಿಂದ ಪ್ರತಿದಿನ ಚರ್ಚೆಯಲ್ಲಿದೆ. ಪಶ್ಚಿಮಘಟ್ಟ ಪ್ರದೇಶದಲ್ಲಿ ಕಳೆದ ಮೂರು ವಾರಗಳಿಂದ ಸತತವಾಗಿ ಮಳೆಯಾಗುತ್ತಿದ್ದು ಚಾರ್ಮಾಡಿ ಘಾಟ್​ನಲ್ಲಿರುವ ಗುಡ್ಡಗಳಲ್ಲಿ ಬಿರುಕುಗಳು ಕಾಣಿಸುತ್ತಿವೆ. ರಸ್ತೆಗಳ ಅಗಲೀಕರಣ ಕಾರ್ಯಗಳಿಂದಲೂ ಬೆಟ್ಟಪ್ರದೇಶ ಶಿಥಿಲಗೊಳ್ಳುತ್ತಿದೆ ಎಂದು ಪರಿಸರವಾದಿಗಳು ಮತ್ತು ಆ ಭಾಗದ ನಿವಾಸಿಗಳು ಹೇಳುತ್ತಿದ್ದಾರೆ.