ಬಿಗ್ ಬಾಸ್ನಲ್ಲಿ ದಿನಸಿ ವಿಚಾರಕ್ಕೆ ಕಿತ್ತಾಟ ನಡೆಯುತ್ತದೆ. ಈ ವಾರ ಸ್ಪರ್ಧಿಗಳಿಗೆ ದಿನಸಿ ಆಯ್ಕೆ ಮಾಡಿಕೊಳ್ಳಲು ಬಿಗ್ ಬಾಸ್ ಅವಕಾಶ ನೀಡಿತ್ತು. ಆದರೆ, ಅಗತ್ಯ ವಸ್ತುಗಳನ್ನು ಪಡೆಯಲು ಅವರಿಂದ ಸಾಧ್ಯವಾಗಲೇ ಇಲ್ಲ. ಈ ವಾರ ಬಿಗ್ ಬಾಸ್ ಮನೆಯಲ್ಲಿ ಹಣ ಚಾಲ್ತಿಗೆ ಬಂದಿದೆ. ಹೆಚ್ಚು ಹಣ ಇದ್ದವರು ಕ್ಯಾಪ್ಟನ್ಸಿ ಟಾಸ್ಕ್ಗೆ ಆಯ್ಕೆ ಆಗುತ್ತಾರೆ. ಈ ಹಣವನ್ನು ಬಳಕೆ ಮಾಡಿಕೊಂಡು ದಿನಸಿ ಪಡೆಯಲು ಬಿಗ್ ಬಾಸ್ ಅವಕಾಶ ನೀಡಿದ್ದರು. ಈ ವೇಳೆ ಕಿತ್ತಾಟ ಶುರುವಾಗಿದೆ. ಕ್ಯಾಪ್ಟನ್ ಆಗಿ ಪಾಯಿಂಟ್ಸ್ ಕೊಡೋಕೆ ತನಿಷಾ ಒಪ್ಪಲಿಲ್ಲ. ಇದರಿಂದ ಜಗಳ ಶುರುವಾಗಿದೆ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಎಪಿಸೋಡ್ ಪ್ರಸಾರ ಕಾಣಲಿದೆ.