ಬಿಗ್ ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ ಅವರು ಕನ್ನಡ ಚಿತ್ರರಂಗಕ್ಕೆ ಹೀರೋ ಆಗಿ ಎಂಟ್ರಿ ಕೊಡುತ್ತಿದ್ದಾರೆ. ತುಳು ಚಿತ್ರಗಳಲ್ಲಿ ನಟಿಸಿ ಫೇಮಸ್ ಆಗಿರುವ ಅವರು ಕನ್ನಡಕ್ಕೆ ಬರಬೇಕು ಎಂಬುದು ಹಲವರ ಕೋರಿಕೆ ಆಗಿತ್ತು. ‘ಅಧಿಪತ್ರ’ ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಜಾಹ್ನವಿ ನಾಯಕಿ. ಸಿನಿಮಾ ಬಗ್ಗೆ ರೂಪೇಶ್ ಟಿವಿ9 ಕನ್ನಡದ ಜೊತೆಗೆ ಮಾತನಾಡಿದ್ದಾರೆ. ‘ನೀವು ಹೋರೋ ಆದ್ರೆ ಸಾನ್ಯಾ ನಾಯಕಿ ಆಗ್ತಾರೆ ಎಂದುಕೊಂಡಿದ್ವಿ’ ಎಂದು ಕೇಳಲಾಯಿತು. ‘ಸಾನ್ಯಾನ ಹೀರೋಯಿನ್ ಮಾಡಿ ಅಂತ ನಾನು ಹೇಳೊಕೆ ಆಗಲ್ಲ. ಅದು ನಿರ್ಮಾಪಕರು ಹಾಗೂ ನಿರ್ದೇಶಕರಿಗೆ ಬಿಟ್ಟ ವಿಚಾರ. ಒಳ್ಳೆಯ ಸ್ಕ್ರಿಪ್ಟ್ ಸಿಕ್ಕರೆ ನಾವು ಒಟ್ಟಾಗಿ ನಟಿಸುತ್ತೇವೆ’ ಎಂದಿದ್ದಾರೆ ರೂಪೇಶ್.