ಖಾಸಗಿ ಸಂಸ್ಥೆಯ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ವಾಹನಕ್ಕೆ ಬೆಂಕಿ ತಗುಲಿ, 4 ಮಂದಿ ಸಜೀವ ಸಹನವಾಗಿರುವ ಘಟನೆ ಪುಣೆಯಲ್ಲಿ ನಡೆದಿದೆ. ಪಿಂಪ್ರಿ ಚಿಂಚ್‌ವಾಡ್ ಪ್ರದೇಶದ ಹಿಂಜೇವಾಡಿಯಲ್ಲಿ ಈ ಘಟನೆ ಸಂಭವಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಟೆಂಪೋ ಟ್ರಾವೆಲರ್ ಕಂಪನಿಯ ಕೆಲವು ಉದ್ಯೋಗಿಗಳನ್ನು ತಮ್ಮ ಕಚೇರಿಗೆ ಕರೆದೊಯ್ಯುತ್ತಿತ್ತು.