Karnataka Assembly Session: ವಿಜಯೇಂದ್ರ ಅವರು ಮುಖ್ಯಮಂತ್ರಿಯವರ ಪ್ರಸ್ತಾಪ ಮಾಡಿದಾಗ ರೊಚ್ಚಿಗೆದ್ದ ಕೃಷ್ಣ ಭೈರೇಗೌಡ ಅವರು, ವಿಷಯಾಂತರ ಮಾಡುವ ಪ್ರಯತ್ನವನ್ನು ವಿಜಯೇಂದ್ರ ಮಾಡುತ್ತಿದ್ದಾರೆ, ವಿಷಯ ಅವರ ಮೇಲಿನ ಆರೋಪಗಳಿಗೆ ಸಂಬಂಧಪಟ್ಟಿದ್ದು, ಮುಖ್ಯಮಂತ್ರಿಯವರನ್ನು ಎಳೆತರುವ ಅವಶ್ಯಕತೆಯಿಲ್ಲ ಎನ್ನುತ್ತಾರೆ. ಅವರಿಬ್ಬರ ನಡುವೆ ವಾಗ್ವಾದ ಜೋರು ಹಿಡಿದಾಗ ಸ್ಪೀಕರ್ ಯುಟಿ ಖಾದರ್ ಸಮಾಧಾನಪಡಿಸುವ ವ್ಯರ್ಥಪ್ರಯತ್ನ ಮಾಡುತ್ತಾರೆ.