ಕಂಗೊಳಿಸುವ ವೇದಿಕೆ ಮೇಲೆ ಅಭಿಷೇಕ್-ಅವಿವಾ ಆರತಕ್ಷತೆ; ಬಂದು ಹಾರೈಸಿದ ರಾಜಕಾರಣಿಗಳು, ನಟರು

ಅಭಿಷೇಕ್ ಅಂಬರೀಷ್ ಹಾಗೂ ಅವಿವಾ ಬಿಡಪ ಅವರ ಆರತಕ್ಷತೆ ಕಾರ್ಯಕ್ರಮ ಬುಧವಾರ (ಜೂನ್ 7) ಅದ್ದೂರಿಯಾಗಿ ನೆರವೇರಿದೆ. ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ನ ತ್ರಿಪುರಾ ವಾಸಿನಿಯಲ್ಲಿ ಈ ಸಮಾರಂಭ ನೆರವೇರಿದೆ. ಅಂಬಿ ಕುಟುಂಬ ರಾಜಕೀಯ ಹಾಗೂ ಚಿತ್ರರಂಗದಲ್ಲಿ ತೊಡಗಿಕೊಂಡಿದೆ. ಅಂಬರೀಷ್ ಕೂಡ ಅನೇಕರ ಜೊತೆ ಒಡನಾಟ ಹೊಂದಿದ್ದರು. ಹೀಗಾಗಿ, ಚಿತ್ರರಂಗದವರು ಹಾಗೂ ರಾಜಕಾರಣಿಗಳು ಆರತಕ್ಷತೆಗೆ ಆಗಮಿಸಿದ್ದರು. ಅವರು ಬಂದು ಈ ನವ ಜೋಡಿಗೆ ಹಾರೈಸಿದ್ದಾರೆ. ಆರತಕ್ಷತೆಗೆ ಸಿದ್ಧಗೊಂಡ ವೇದಿಕೆ ಕಂಗೊಳಿಸಿತು.