ಯೋಗೀಶ್ ಕೊಲೆ ಪ್ರಕರಣದಲ್ಲಿ ತನ್ನ ಪಾಲೇನೂ ಇಲ್ಲ, ಯಾರಿಗೂ ಕಾಲ್ ಮಾಡಿಲ್ಲ ಎಂದು ವಿನಯ್ ಕುಲಕರ್ಣಿ ಹೇಳುತ್ತಾರೆ. ಬಹಳಷ್ಟು ಜನಕ್ಕೆ ತಾನು ಹೊರಗಿರೋದು ಬೇಕಿರಲಿಲ್ಲ, ವಾಪಸ್ಸು ಜೈಲಿಗೆ ಹೋಗುವುದನ್ನು ನೋಡಲು ಸಾವಿರಾರು ಜನ ಕಾಯ್ತಾ ಇದ್ದರು ಎಂದು ಅವರು ಹೇಳುತ್ತಾರೆ. 2016 ಮೇ ತಿಂಗಳಲ್ಲಿ ಜಿಪಂ ಸದಸ್ಯ ಯೋಗೀಶ್ ಗೌಡ ಕೊಲೆ ನಡೆದಿತ್ತು.