ಪಾಕಿಸ್ತಾನದ ಜೊತೆ ಯುದ್ಧ ಬೇಡವೆನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ಭಾರತದ ನಿಜವಾದ ರಾಯಭಾರಿ ಆಗುತ್ತಾರೆ. ಇವರನ್ನ ರಾಯಭಾರಿಯಾಗಿ ಕಳಿಸಿದರೆ ಪಾಕಿಸ್ತಾನ ತನ್ನ ಎಲ್ಲ ಅತ್ಯುನ್ನತ ಗೌರವ ಪುರಸ್ಕಾರಗಳನ್ನು ಇವರಿಗೆ ನೀಡಿ ಅಲ್ಲಿನ ರಸ್ತೆಗಳಲ್ಲಿ ಚಿನ್ನದ ರಥದಲ್ಲಿ ಮೆರವಣಿಗೆ ಮಾಡಿಸುತ್ತದೆ ಎಂದು ವಿರೋಧ ಪಕ್ಷದ ನಾಯಕ ಅರ್ ಅಶೋಕ ವ್ಯಂಗ್ಯವಾಡಿದರು.