ಕೊಡಗು, ಹಾಸನ, ಚಾಮರಾಜಪೇಟೆ ಮೊದಲಾದ ಜಿಲ್ಲೆಗಳ ಅರಣ್ಯಪ್ರದೇಶಗಳಿಗೆ ಹೊಂದಿಕೊಂಡಿರುವ ಗ್ರಾಮಗಳಲ್ಲಿ ವನ್ಯಜೀವಿಗಳ ಉಪಟಳ ಹೆಚ್ಚಾಗುತ್ತಿದೆ. ಚಿರತೆಗಳು ಗ್ರಾಮಗಳಿಗೆ ನುಗ್ಗಿ ಸಾಕುಪ್ರಾಣಿಗಳನ್ನು ಎತ್ತಿಕೊಂಡು ಹೋಗುವುದು, ಕಾಡಾನೆಗಳು ಗ್ರಾಮ ಮತ್ತು ತೋಟ, ಹೊಲ-ಗದ್ದೆಗಳಿಗೆ ನುಗ್ಗುವುದು ಸಾಮಾನ್ಯವಾಗಿದೆ.