ವಿಜಯಪುರ: ಟೈರ್ ಸ್ಫೋಟಕ್ಕೆ ಹೊತ್ತಿ ಉರಿದ ಖಾಸಗಿ ಬಸ್! ವಿಡಿಯೋ ಇಲ್ಲಿದೆ

ವಿಜಯಪುರ ತಾಲೂಕಿನ ಹಿಟ್ಟನಹಳ್ಳಿ ಬಳಿಯ ಎನ್​ಎಚ್ 50 ರಲ್ಲಿ ಟೈರ್ ಸ್ಫೋಟಗೊಂಡು ಖಾಸಗಿ ಬಸ್ ಹೊತ್ತಿ ಉರಿದ ಘಟನೆ ನಡೆದಿದೆ. ಬೆಂಗಳೂರಿಂದ ವಿಜಯಪುರಕ್ಕೆ ಹೋಗುತ್ತಿದ್ದ ಬಸ್ ಇದಾಗಿದೆ. ಬಸ್​ಗೆ ಬೆಂಕಿ ಹತ್ತುತಲೇ ಗಾಬರಿಗೊಂಡ ಪ್ರಯಾಣಿಕರು ಬಸ್​ನಿಂದ ಇಳಿದಿದ್ದಾರೆ. ಆದರೆ ಲಗೇಜ್​ಗಳು ಬೆಂಕಿಗಾಹುತಿಯಾಗಿವೆ.