ವರದಿಯಲ್ಲಿ ತಪ್ಪು-ಒಪ್ಪುಗಳಿರುತ್ತವೆ ಎಂದರು. ಆದರೆ ಅವುಗಳನ್ನು ಚರ್ಚೆ ನಡೆಸಿ ತಿದ್ದುಪಡಿಗಳ ಮೂಲಕ ಸರಿಪಡಿಸಬಹುದು, ಅದೇನೂ ದೊಡ್ಡ ವಿಷಯವಲ್ಲ ಎಂದ ಅವರು ಅದನ್ನು ಸಾರ್ವಜನಿಕಗೊಳಿಸದಿರುವುದು ತಪ್ಪು ಎಂದು ಹೇಳಿದರು. ಕಾರ್ಯಕಾರಿಣಿ ಸಭೆಯಲ್ಲಿ ಕರ್ನಾಟಕ ಜಾತಿಗಣತಿ ಬಗ್ಗೆ ಚರ್ಚೆಯಾಯಿತೇ ಅಂತ ಕೇಳಿದಾಗ ಚರ್ಚೆ ಆಗಲಿಲ್ಲ ಆದರೆ ಮುಖ್ಯಮಂತ್ರಿಗಳು ವರದಿ ರೆಡಿಯಿದೆ ಅಂತ ಸಭೆಗೆ ತಿಳಿಸಿದರು ಎಂದು ಹರಿಪ್ರಸಾದ್ ಹೇಳಿದರು.