ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯ ತಾಲೂಕಿನ ತಹಶೀಲ್ದಾರ್ ಕಚೇರಿ ಮಳೆ ನೀರಿನಿಂದ ಸೋರುತ್ತಿದೆ. ಕಚೇರಿ ತುಂಬಾ ನೀರು ನೀರಾಗಿದೆ. ಮಹತ್ವದ ಕಂದಾಯ ದಾಖಲೆಗಳೆಲ್ಲಾ ನೀರುಪಾಲಾಗಿದ್ದು, ಅಧಿಕಾರಿಗಳು ಮಾತ್ರ ಅಸಹಾಯಕರಾಗಿದ್ದಾರೆ. ಕಳೆದ ಎರಡ್ಮೂರು ದಿನಗಳಿಂದ ಕರ್ನಾಟಕದಲ್ಲಿ ಮಳೆ ಆರ್ಭಟಿಸಿತ್ತು. ಇಂದು ಕೊಂಚ ಶಾಂತವಾಗಿದೆ.