ಚಾಮರಾಜನಗರ ಜಿಲ್ಲಾಡಳಿತದ ಸಹಾಯದೊಂದಿಗೆ ಇನ್ಪೋಸಿಸ್ ರೋಟರಿ ಕಡೆಯಿಂದ ಆಸಕ್ತಿಯುಳ್ಳ ಯುವ ವಿಚಾರಣಾಧೀನ ಕೈದಿಗಳಿಗೆ ಶಿಕ್ಷಣ, ಟ್ಯಾಲಿ, ಎಕ್ಸ್ ಎಲ್, ಡಾಟಾ ಎಂಟ್ರಿ ಸೇರಿ ವಿವಿಧ ಬಗೆಯ ಶಿಕ್ಷಣ ಹೇಳಿ ಕೊಡಲಾಗುತ್ತಿದೆ. ಕಾರಾಗೃಹದಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ತರಬೇತಿ ನೀಡಲಾಗಿದೆ. ಬಿಡುಗಡೆ ಬಳಿಕ ಅಪರಾಧ ಕೃತ್ಯದಲ್ಲಿ ಭಾಗಿಯಾಗದೆ ಸ್ವಾವಲಂಭಿಯಾಗಿ ಬದುಕಲು ಇದು ಸಹಾಯಕವಾಗಿದೆ.