ಕೊಲೆ ಆರೋಪಿ ಮಹೇಶ್​ಗೆ ಗರ್ಭಧರಿಸಿದ್ದ ಹೆಂಡತಿ ಶುಭಾ ಮೇಲೆ ಸದಾ ಅನುಮಾನ

ಮಹೇಶ್ ತನ್ನ ಹೆಂಡತಿಯ ಮೇಲೆ ವಿಪರೀತ ಅನುಮಾನ ಪಡುತ್ತಿದ್ದ ಅದರೆ ತಾನು ಬೇರೆ ಮಹಿಳೆಯರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಎಂದು ಎಸ್ ಪಿ ಕವಿತಾ ಹೇಳುತ್ತಾರೆ. ಶುಭಾ ಗರ್ಭಧರಿಸಿರುವ ಸಂಗತಿ ಅವನನ್ನು ವಿಚಲಿತಗೊಳಿಸಿತ್ತಂತೆ, ಅದಕ್ಕೆ ಬೇರೆಯವರು ಕಾರಣವಾಗಿರಬಹುದೆಂಬ ಸಂಶಯ ಕಾಡಲಾರಂಭಿಸಿದ ಬಳಿಕ ಆಕೆಯನ್ನು ಕೊಲ್ಲಲು ನಿರ್ಧರಿಸಿದ್ದಾನೆ ಎಂದು ಪೊಲೀಸ್ ಆಧಿಕಾರಿ ಹೇಳುತ್ತಾರೆ.