‘ಕವಿತೆಯ ಅನುಭವ ಕೊಟ್ಟಿದೆ’; ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಬಗ್ಗೆ ರಾಜ್ ಬಿ. ಶೆಟ್ಟಿ ಮಾತು

‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಸೆಪ್ಟೆಂಬರ್ 1ರಂದು ರಿಲೀಸ್ ಆಗಿದೆ. ಈ ಸಿನಿಮಾಗೆ ಸೆಲೆಬ್ರಿಟಿ ಶೋ ಆಯೋಜನೆ ಮಾಡಲಾಗಿತ್ತು. ಅನೇಕರು ಬಂದು ಸಿನಿಮಾ ವೀಕ್ಷಿಸಿದ್ದಾರೆ. ರಾಜ್ ಬಿ. ಶೆಟ್ಟಿ ಕೂಡ ಗೆಳೆಯನ ಚಿತ್ರ ನೋಡಿದ್ದಾರೆ. ‘ಸಿನಿಮಾದ ಟೈಟಲ್ ಬಹಳ ಇಷ್ಟವಾಯ್ತು. ಈ ಸಿನಿಮಾದ ಅನುಭವ ಚೆನ್ನಾಗಿದೆ. ರುಕ್ಮಿಣಿ ವಸಂತ್ ನಟನೆ ಅದ್ಭುತ. ಕನ್ನಡಕ್ಕೆ ಒಳ್ಳೆಯ ನಟಿ ಸಿಕ್ಕಿದ್ದಾರೆ. ನನ್ನ ಗೆಳೆಯ ರಕ್ಷಿತ್ ಶೆಟ್ಟಿ ನಟನೆ ಕೂಡ ಮೆಚ್ಚುವಂಥದ್ದು. ಮನು ಆಗಿ ಅವರು ಕಾಡ್ತಾರೆ. ಸಿನಿಮಾ ಕವಿತೆಯ ಅನುಭವ ಕೊಟ್ಟಿದೆ’ ಎಂದಿದ್ದಾರೆ ರಾಜ್ ಬಿ. ಶೆಟ್ಟಿ.