ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ಹಾಲಿನ ಕಂಟೈನರ್‌ನಲ್ಲಿ ಉಗುಳಿದ ಡೆಲಿವರಿ ಮ್ಯಾನ್ ಸಿಕ್ಕಿಬಿದ್ದಿದ್ದಾನೆ. ಆತನ ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಕೃತ್ಯ ಎಸಗಿದ ಆಲಂ ತಾನು ಹಾಲಿನ ಪಾತ್ರೆಯಲ್ಲಿನ ಹಾಲನ್ನು ಪರಿಶೀಲಿಸುತ್ತಿದ್ದೆ ಎಂದು ಹೇಳಿದರೆ ಸಿಸಿಟಿವಿಯಲ್ಲಿ ದೃಶ್ಯ ನೋಡಿದವರು ಆತ ಬೇಕೆಂದೇ ಹಾಲಿನ ಪಾತ್ರೆಯಲ್ಲಿ ಉಗುಳುತ್ತಿದ್ದಾನೆ ಎಂದು ಹೇಳಿದ್ದಾರೆ.