ಚನ್ನಪಟ್ಟಣದಿಂದ ಎರಡು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದ ಮತ್ತು ಮುಖ್ಯಮಂತ್ರಿ ಕೂಡ ಆಗಿದ್ದ ಹೆಚ್ ಡಿ ಕುಮಾರಸ್ವಾಮಿಯವರು ಕ್ಷೇತ್ರಕ್ಕೆ ನೀಡಿರುವ ಕೊಡುಗೆಯೇನು ಅಂತ ಕೇಳುವಂತೆ ಶಿವಕುಮಾರ್ ಜನರನ್ನು ಆಗ್ರಹಿಸಿದರು. ಅವರು ಕೇವಲ ಸ್ವಾರ್ಥ ರಾಜಕಾರಣ ಮಾಡುತ್ತಿದ್ದಾರೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.