ಜನವರಿ 19 ರಂದು ದೆಹಲಿಯಲ್ಲಿ ನಡೆದ ಚೊಚ್ಚಲ ಆವೃತ್ತಿಯ ಖೋ ಖೋ ಫೈನಲ್ ಪಂದ್ಯದಲ್ಲಿ ಭಾರತ ಮಹಿಳಾ ತಂಡವು ನೇಪಾಳವನ್ನು ಏಕಪಕ್ಷೀಯವಾಗಿ 38 ಅಂಕಗಳ ಬೃಹತ್ ಅಂತರದಿಂದ ಸುಲಭವಾಗಿ ಮಣಿಸಿ ಪ್ರಶಸ್ತಿ ಗೆದ್ದುಕೊಂಡಿದೆ. ಟೂರ್ನಿಯ ಮೊದಲ ಪಂದ್ಯದಿಂದಲೂ ಪ್ರಾಬಲ್ಯದೊಂದಿಗೆ ಪ್ರತಿ ಪಂದ್ಯವನ್ನು ಗೆಲ್ಲುತ್ತಾ ಬಂದಿದ್ದ ಭಾರತ ಮಹಿಳಾ ತಂಡ, ಫೈನಲ್‌ನಲ್ಲೂ ಅದೇ ಶೈಲಿಯನ್ನು ಮುಂದುವರಿಸಿ ನೇಪಾಳವನ್ನು 78-40 ಅಂಕಗಳ ಅಂತರದಿಂದ ಸೋಲಿಸಿ ಚಾಂಪಿಯನ್ ಪಟ್ಟಕೇರಿದೆ.