ದಿವಂಗತ ನಟ ಪುನೀತ್ ರಾಜ್ಕುಮಾರ್ ಅವರು ನಿಧನರಾಗಿ ಎರಡು ವರ್ಷಗಳು ಕಳೆದರೂ ಅಭಿಮಾನಿಗಳ ಮನಸ್ಸಿನಲ್ಲಿ ಶಾಸ್ವತವಾಗಿ ನೆಲೆಯೂರಿದ್ದಾರೆ. ಅಭಿಮಾನಿಗಳು ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುವಾಗ ಅಪ್ಪು ಭಾವಚಿತ್ರವನ್ನೂ ಕೊಂಡೊಯ್ಯತ್ತಾರೆ. ಇದೀಗ ಪುನೀತ್ ಅಭಿಮಾನಿಯೊಬ್ಬರು ಅಪ್ಪು ಭಾವಚಿತ್ರವನ್ನು ಅಯೋಧ್ಯೆಗೆ ತೆಗೆದುಕೊಂಡು ಹೋಗಿದ್ದಾರೆ.