ನಿರ್ದಿಷ್ಟವಾದ ಬೇಡಿಕೆಗಳೇನೂ ತಮಗಿಲ್ಲ, ಅದರೆ ಹಲವಾರು ವರ್ಷಗಳಿಂದ ರಾಜ್ಯ ಕೆಲ ಸಮಸ್ಯೆಗಳನ್ನು ಎದುರಿಸುತ್ತಿದೆ, ಅವುಗಳಿಗೆ ಕೇಂದ್ರದಿಂದ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಲಾಗುವುದು ಮತ್ತು ಸಂಪುಟದಲ್ಲಿ ಪ್ರಾತಿನಿಧ್ಯ ಒದಗಿಸುವುದು ಪ್ರಧಾನಿ ನರೇಂದ್ರ ಮೋದಿಯವರ ವಿವೇಚನೆ ಬಿಟ್ಟಿದ್ದು ಎಂದು ಕುಮಾರಸ್ವಾಮಿ ಹೇಳಿದರು.