ಚಿಕ್ಕಬಳ್ಳಾಪುರ‌: ಬಸ್ ಹತ್ತುವ ವೇಳೆ ಮಾಂಗಲ್ಯ ಚೈನ್ ಕದ್ದು ಸಿಕ್ಕಿಬಿದ್ದ ಕಳ್ಳಿ

ಚಿಕ್ಕಬಳ್ಳಾಪುರ‌: ಜನಸಂದಣಿಯನ್ನೇ ಬಂಡವಾಳವನ್ನಾಗಿ ಮಾಡಿಕೊಂಡ ಮಹಿಳೆಯೊಬ್ಬಳು ಮಾಂಗಲ್ಯ ಸರ ಕಳವು ಮಾಡಿ ಸಿಕ್ಕಿಬಿದ್ದ ಘಟನೆ ಚಿಕ್ಕಬಳ್ಳಾಪುರ ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣದಲ್ಲಿ ನಡೆದಿದೆ. ಸರಗಳ್ಳತನಕ್ಕೆ ಯತ್ನಿಸಿದ್ದಲ್ಲದೆ, ಸಿಕ್ಕಿಬಿದ್ದಾಗ ನಾನವಳಲ್ಲ ಎಂದು ಹೈ ಡ್ರಾಮ ಮಾಡಿದ್ದಾಳೆ.