ವಿಜಯೇಂದ್ರ ಸುತ್ತೂರು ಮಠದಲ್ಲೇ ಬೆಳಗಿನ ಉಪಹಾರ ಸೇವಿಸಿದರು. ಅಕ್ಕಿ ರೊಟ್ಟಿಯ ಮೇಲೆ ವಿಶೇಷ ಆಸಕ್ತಿ ತೋರಿದ ಅವರು ಇಡ್ಲಿ ಬಡಿಸಲು ಬಂದರೂ ನಿರಾಕರಿಸಿ ರೊಟ್ಟಿಯನ್ನು ಸವಿದರು. ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಮಾತಾಡಿದ ಅವರು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಹೇಳಿದರು.