ದಿನ ಕಳೆದಂತೆಲ್ಲ ಬಿಗ್ ಬಾಸ್ ಆಟದಲ್ಲಿ ಪೈಪೋಟಿ ಜಾಸ್ತಿ ಆಗುತ್ತಿದೆ. ತಮ್ಮನ್ನು ತಾವು ಉಳಿಸಿಕೊಳ್ಳಲು ಎಲ್ಲರೂ ಕಷ್ಟಪಡುತ್ತಿದ್ದಾರೆ. ಈಗ ನೀಡಿದ ಟಾಸ್ಕ್ನಲ್ಲಿ ಅಗ್ರೆಷನ್ ಹೆಚ್ಚಾಗಿದೆ. ಟಾಸ್ಕ್ ಆಡುವಾಗ ಭವ್ಯಾ ಗೌಡ ಮತ್ತು ಐಶ್ವರ್ಯಾ ಸಿಂಧೋಗಿ ಅವರು ಜಟ್ಟು ಹಿಡಿದುಕೊಂಡು ಕಿತ್ತಾಡಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.