ಅಕ್ಷಯ ತೃತಿಯ ದಿನ ಚಿನ್ನ ಬೆಳ್ಳಿ ಬಂಗಾರ ಕೊಂಡರೆ ಶ್ರೇಷ್ಠ ಎನ್ನುವ ನಂಬಿಕೆ ಹಿನ್ನಲೆ ಇಂದು ಅಕ್ಷಯ ತೃತಿಯ ಅಂತ ಮಹಿಳೆಯರು ಚಿಕ್ಕಬಳ್ಳಾಫುರದಲ್ಲಿ ಬಂಗಾರ ಕೊಳ್ಳಲು ಮುಗಿಬಿದ್ದ ದೃಶ್ಯಗಳು ಕಂಡು ಬಂತು. ನಗರದ ಗಂಗಮ್ಮ ಗುಡಿ ಗೋಲ್ಡ್ ಬಜಾರ್ ನಲ್ಲಿರುವ ಬಂಗಾರದ ಅಂಗಡಿಗಳಲ್ಲಿ ಜನ ಜಂಗುಳಿಯಾಗಿತ್ತು. ಗೃಹ ಲಕ್ಷ್ಮಿ ಗ್ಯಾರಂಟಿ ಯೋಜನೆಯ ಫಲಾನುಭವಿ ಮಹಿಳೆಯರು, ಕೂಡಿಟ್ಟ ಹಣದಿಂದ ಬಂಗಾರ ಖರೀದಿ ಮಾಡಿದ್ದಾರೆ.