ಅಯ್ಯಪ್ಪ ಸ್ವಾಮಿ ಪೂಜೆ ವೇಳೆ ಏಕಾಏಕಿಯಾಗಿ ಜ್ಯೋತಿ ಪ್ರಜ್ವಲಿಸಿದ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ನಗರದಲ್ಲಿ ನಡೆದಿದೆ. ಅಯ್ಯಪ್ಪ ಸ್ವಾಮಿಯ ವಿಶೇಷ ಪೂಜಾ ಕಾರ್ಯಕ್ರಮದ ಅಂಗವಾಗಿ ನಡೆಯುತ್ತಿದ್ದ ಹೋಮದ ವೇಳೆ ಏಕಾಏಕಿಯಾಗಿ ಅಗ್ನಿ ಪ್ರಜ್ವಲಿಸಿದೆ. ಇದು ಅಯ್ಯಪ್ಪ ಸ್ವಾಮಿಯ ಪವಾಡ ಎಂದು ಮಾಲಾಧಾರಿಗಳು ಹೇಳುತ್ತಿದ್ದಾರೆ.