ಕೊಲೆ ಕೇಸ್ನಲ್ಲಿ ಸಿಲುಕಿರುವ ನಟಿ ಪವಿತ್ರಾ ಗೌಡ ಈಗ ಜೈಲು ಪಾಲಾಗಿದ್ದಾರೆ. ತಮಗೆ ಅಶ್ಲೀಲ ಮೆಸೇಜ್ ಕಳಿಸಿದ ಎಂಬ ಕಾರಣಕ್ಕಾಗಿ ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಎಂಬಾತನನ್ನು ಬೆಂಗಳೂರಿಗೆ ಕರೆತಂದು ಕೊಲೆ ಮಾಡಿದ ಆರೋಪದಲ್ಲಿ ಪವಿತ್ರಾ ಗೌಡ ಎ1 ಆರೋಪಿ ಆಗಿದ್ದಾರೆ. ಜೂನ್ 20ರಂದು ಪವಿತ್ರಾ ಗೌಡ ಅವರ ಪೊಲೀಸ್ ಕಸ್ಟಡಿ ಅಂತ್ಯವಾಯಿತು. ಬಳಿಕ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಯಿತು. ಈಗ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಪವಿತ್ರಾ ಗೌಡ ದಿನ ಕಳೆಯುವಂತಾಗಿದೆ. ಜೈಲಿನಲ್ಲಿ ಇರುವ ಅವರನ್ನು ನೋಡಲು ತಾಯಿ, ಚಿಕ್ಕಮ್ಮ, ಸಹೋದರ ಮುಂತಾದವರು ಬಂದಿದ್ದಾರೆ. ಈ ವೇಳೆ ಮಾಧ್ಯಮಗಳ ಕ್ಯಾಮೆರಾ ಕಂಡು ಪವಿತ್ರಾ ಗೌಡ ಸಹೋದರ ಗರಂ ಆಗಿದ್ದಾರೆ. ದರ್ಶನ್ ಅವರ ಗೆಳತಿ ಪವಿತ್ರಾ ಗೌಡಗೆ ಕಾನೂನಿನ ಸಂಕಷ್ಟ ಹೆಚ್ಚಾಗಿದೆ. ತನಿಖೆ ಮುಂದುವರಿದಂತೆಲ್ಲ ಅನೇಕ ಶಾಕಿಂಗ್ ಅಂಶಗಳು ಹೊರಬರುತ್ತಿವೆ.