ತೆಲುಗು ಬಿಡ್ಡ ಚಂದ್ರಬಾಬು ಕುಟುಂಬದಲ್ಲಿ ಸಂಭ್ರಮ; ಎನ್ಟಿಆರ್ ಪ್ರತಿಮೆಗೆ ಪುಷ್ಟನಮನ ಸಲ್ಲಿಸಿದ ನಾಯ್ಡು ಮೈತ್ರಿಕೂಟದ ಗೆಲುವು ಬಹುತೇಕ ಖಚಿತವಾಗುತ್ತಿದ್ದಂತೆ ತೆಲುಗು ಬಾಂಧವರು ಸಂಭ್ರಮಿಸುತ್ತಿದ್ದಾರೆ. ಚಂದ್ರಬಾಬು ನಾಯ್ಡು ಕುಟುಂಬ ಸದಸ್ಯರೊಂದಿಗೆ ಕೇಕ್ ಕತ್ತರಿಸಿ ಸಂಭ್ರಮಿಸಿದರು. ಇನ್ನು ಮಾವ ಮಾಜಿ ಮುಖ್ಯಮಂತ್ರಿ, ಹಿರಿಯ ನಟ ನಂದಮೂರಿ ತಾರಕರಾಮರಾವ್ ಅವರ ಪ್ರತಿಮೆಗೆ ಪುಷ್ಟನಮನ ಸಲ್ಲಿಸಿದರು. ಒಟ್ಟು 175 ವಿಧಾನಸಭಾ ಕ್ಷೇತ್ರಗಳ ಪೈಕಿ ಆಡಳಿತಾರೂಢ ವೈಸಿಪಿ 13 ಸ್ಥಾನಗಳನ್ನು ಮಾತ್ರ ಗಳಿಸಿದ್ದು, ಮೈತ್ರಿಕೂಟ 162 ಸ್ಥಾನಗಳನ್ನು ಗೆದ್ದಿದೆ.