ಪ್ರಧಾನ ಮಂತ್ರಿ ನಿವಾಸಕ್ಕೆ ತೆರಳಿದ ಜೆಡಿಎಸ್ ನಾಯಕರು

ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿ ಕೇವಲ 19 ಸ್ಥಾನಗಳನ್ನು ಮಾತ್ರ ಗೆದ್ದ ಜೆಡಿಎಸ್ ನಾಯಕರಿಗೆ ತಮಗಿಷ್ಟು ಸ್ಥಾನಗಳು ಬೇಕಬೇಕೆಂದು ಪಟ್ಟು ಹಿಡಿಯುದು ಸಾಧ್ಯವಾಗಲಾರದು. ಬಿಜೆಪಿ ವರಿಷ್ಠರು ನೀಡಿವಷ್ಟು ಸ್ಥಾನಗಳನ್ನು ಮರುಮಾತಿಲ್ಲದೆ ಸ್ವೀಕರಿಸಬೇಕು. ಮಾತುಕತೆಗಾಗಿ ಬಿಜೆಪಿ ಹೈಕಮಾಂಡ್ ರಾಜ್ಯದ ನಾಯಕರನ್ನು ಕರೆಸದಿರುವುದು ಗಮನಾರ್ಹ. ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಜೊತೆ ಫೋನ್ ಸಂಭಾಷಣೆ ನಡೆಸುವ ಸಾಧ್ಯತೆ ಇದೆ.