ಬೆಂಗಳೂರು: ವಿದೇಶ ಪ್ರವಾದಿಂದ ನಿನ್ನೆಯಷ್ಟೇ ವಾಪಸಾಗಿರುವ ಮಾಜಿ ಸಿಎಂ ಕುಮಾರಸ್ವಾಮಿ ಅವರು ಇಂದು ಶನಿವಾರಜೆಡಿಎಸ್ ಕಛೇರಿ ಜೆಪಿ ಭವನದಲ್ಲಿ ಸುದ್ದಿಗೊಷ್ಠಿ ನಡೆಸಿ, ರಾಜ್ಯದಲ್ಲಿ ನಡೆಯುತ್ತಿರುವ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಮಾತನಾಡಿದರು. ಅದರಲ್ಲೂ ನಿರ್ದಿಷ್ಟವಾಗಿ ‘ಅಣ್ಣ ಹೇಳ್ತಾರೆ ತಮ್ಮ ಕೇಳಬೇಕು’ ಎಂದು ಉಮ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು. ಈ ಜನ್ಮದಲ್ಲಿ ಅಂತೂ ಅಂತಹ ತಮ್ಮ ನನಗೆ ಬೇಡ ಎಂದು ಹೆಚ್ಡಿಕೆ ಖಡಾಖಂಡಿತವಾಗಿ ಹೇಳಿದರು. ಮುಂದಿನ ಜನ್ಮದಲ್ಲೂ ಅವರು ನನಗೆ ತಮ್ಮ ಆಗೋದೂ ಬೇಡ ಎಂದೂ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಟಾಂಗ್ ಕೊಟ್ಟರು!