ಬಾಗಲಕೋಟೆ: ಈಗ ಸಾಹಸಗಳ ಯುಗ. ರೈತ ತಾನಷ್ಟೇ ಅಲ್ಲ; ತನ್ನ ಜೀವನಸಾಥಿಗಳಾದ ಜಾನುವಾರುಗಳಿಂದಲೂ ಸಾಹಸ ಮಾಡಿಸುತ್ತಾನೆ. ಆಗಾಗ್ಗೆ ಇಂತಹ ಘಟನೆಗಳು ಅಲ್ಲಲ್ಲಿ ನಡೆಯುತ್ತಿರುತ್ತವೆ. ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ತಾಲೂಕಿನ ಬೂದಿನಗಡ ಗ್ರಾಮದಲ್ಲೂ ಇಂತಹುದೇ ಸಾಹಸ ನಡೆದಿದೆ. ಜೋಡೆತ್ತುಗಳಿಂದ ಈ ಭರ್ಜರಿ ಸಾಹಸ ಕಂಡುಬಂದಿದ್ದು, ಅವು ಎರಡೂವರೆ ಗಂಟೆಯಲ್ಲಿ 9 ಎಕರೆ ಜಮೀನು ಹರಗಿವೆ (Ploughing). ಅಂದರೆ ಜಮೀನು ಉತ್ತಿವೆ. ಭೀಮಪ್ಪ ಮಲ್ಲಪ್ಪ ವಾಲೀಕಾರ ಅವರಿಗೆ ಸೇರಿದ ಎತ್ತುಗಳು ಇವಾಗಿವೆ.