ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣದ ಶಾಸಕ ಸಂಜಯ್ ಗಾಯಕ್ವಾಡ್, ಮುಂಬೈ ಎಂಎಲ್ಎ ಗೆಸ್ಟ್ಹೌಸ್ನಲ್ಲಿರುವ ಕ್ಯಾಂಟೀನ್ನ ನಿರ್ವಾಹಕರನ್ನು ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಶಾಸಕ ಸಂಜಯ್ಗೆ ನೀಡಿರುವ ದಾಲ್ ಚೆನ್ನಾಗಿಲ್ಲವೆಂದು ಕ್ಯಾಂಟೀನ್ ನಿರ್ವಾಹಕರನ್ನು ಥಳಿಸಿದ್ದಾರೆ. ದಾಲ್ಗೆ ಹಾಕಿದ್ದ ಬೇಳೆಗಳಿಂದ ವಾಸನೆ ಬರುತ್ತಿತ್ತು ಎಂದು ಶಾಸಕರು ಆರೋಪಿಸಿದ್ದಾರೆ.ಇದರಿಂದ ಕೋಪಗೊಂಡ ಅವರು ಕ್ಯಾಂಟೀನ್ ನಿರ್ವಾಹಕರ ಮೇಲೆ ಹಲ್ಲೆ ನಡೆಸಿದ್ದಾರೆ.