ವಿಷಯಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಶಿವಕುಮಾರ್, ಮಾಧ್ಯಮಗಳಲ್ಲಿ ನೋಡಿದ ಬಳಿಕ ಅದು ತನ್ನ ಗಮನಕ್ಕೆ ಬಂದಿದ್ದು, ವಿದ್ಯುತ್ ಯಾರು ಕದ್ದರೇನು ಅದು ಕಳ್ಳತನವೇ, ಬೆಸ್ಕಾಂ ಆಧಿಕಾರಿಗಳು ಮತ್ತು ಇಂಧನ ಖಾತೆ ಸಚಿವ ಕೆಜೆ ಜಾರ್ಜ್ ಯಾವ ಕ್ರಮ ತೆಗೆದುಕೊಳ್ಳುತ್ತಾರೋ ಗೊತ್ತಿಲ್ಲ, ವಿಷಯ ಅವರ ಸುಪರ್ದಿಗೆ ಬಿಟ್ಟಿದ್ದು ಎಂದರು.