ಜೆಡಿಎಸ್ ಒಂದು ಜ್ಯಾತ್ಯಾತೀತ ಪಕ್ಷವೆಂದು ಗುರುತಿಸಿಕೊಂಡ ಕಾರಣ ಮುಸಲ್ಮಾನರ ಒಲವು ಗಳಿಸಿಕೊಂಡಿತ್ತು, ಆದರೆ ಬಿಜೆಪಿ ಜೊತೆ ಕೈ ಜೋಡಿಸಿದ್ದು ಭ್ರಮನಿರಸನ ಉಂಟು ಮಾಡಿದೆ ಎಂದು ಅವರು ಹೇಳತ್ತಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ತಮ್ಮ ಆಪ್ತರ ಮುಂದೆ ಅಸಮಾಧಾನ ತೋಡಿಕೊಳ್ಳುತ್ತಿದ್ದು ಮೈತ್ರಿ ವಿಚಾರದಲ್ಲಿ ತಮ್ಮನ್ನು ಕತ್ತಲೆಯಲ್ಲಿ ಇಡಲಾಗಿದೆ ಎಂದಿದ್ದಾರೆ.